    ಮೂಲದೊಡ್ನೆ ಪರಿಶೀಲಿಸಿ

ಐಸೊಮೆರಿಸಂ (ರಸಾಯನವಿಜ್ಞಾನದಲ್ಲಿ): ಎರಡು ಅಥವಾ ಅನೇಕ ರಾಸಾಯನಿಕ ಸಂಯುಕ್ತಗಳ ಅಣುಸೂತ್ರ (ಮಾಲಿಕ್ಯುಲರ್ ಫಾರ್ಮುಲ) ಒಂದೇ ಇದ್ದು ಅವುಗಳ ಗುಣಲಕ್ಷಣಗಳಲ್ಲಿ ವ್ಯತ್ಯಾಸವಿರುವಿಕೆ. ಇಂಥ ಸಂಯುಕ್ತಗಳಿಗೆ ಐಸೊಮರುಗಳು ಎಂದು ಹೆಸರು. ಒಂದು ಸಂಯುಕ್ತದಲ್ಲಿರುವ ರಾಸಾಯನಿಕ ಧಾತುಗಳು ಮತ್ತು ಅವುಗಳ ಪ್ರಮಾಣ-ಅಂದರೆ ಸಂಯುಕ್ತದ ಸಂಯೋಜನೆ (ಕಾಂಪೊಸಿಷನ್) ಅದರ ಗುಣಲಕ್ಷಣಗಳನ್ನು ನಿರ್ಧರಿಸುವುದೆಂದು ಒಂದು ಕಾಲದಲ್ಲಿ ನಂಬಲಾಗಿತ್ತು. ಇದು ಸರಿಯಿಲ್ಲವೆಂದು ಮುಂದೆ ವೇದ್ಯವಾಯಿತು. ಸಂಯುಕ್ತಗಳ ಸಂಯೋಜನೆ ಒಂದೇ ಆಗಿದ್ದು ಅವುಗಳ ಅಣು ತೂಕಗಳಲ್ಲಿ ವ್ಯತ್ಯಾಸವಿರುವುದು ಸಾಧ್ಯವೆಂಬುದನ್ನು ರಸಾಯನ ವಿಜ್ಞಾನಿಗಳು ಬಲುಬೇಗ ಮನಗಂಡರು. ಅಸಿಟೆಲೀನ್ ಮತ್ತು ಬೆಂಜಿûೕನ್ ಎರಡರಲ್ಲೂ ಅದೇ ಧಾತುಗಳು (ಕಾರ್ಬನ್ ಮತ್ತು ಹೈಡ್ರೋಜನ್) ಅದೇ ಪ್ರಮಾಣದಲ್ಲಿ (ಕಾರ್ಬನ್ನಿನ ಒಂದು ಪರಮಾಣು ಹೈಡ್ರೋಜನ್ನಿನ ಒಂದು ಪರಮಾಣು) ಇದೆ. ಎರಡಕ್ಕೂ ಮೂಲಸೂತ್ರ (ಎಂಪಿರಿಕಲ್ ಫಾರ್ಮುಲ) ಒಂದೇ, ಅಊ. ಈ ಸೂತ್ರದಂತೆ ಯಾವುದೇ ಸಂಯುಕ್ತದ ಅಣುವಿನಲ್ಲಿ ಒಂದು ಕಾರ್ಬನ್ ಪರಮಾಣು ಮತ್ತು ಒಂದು ಹೈಡ್ರೋಜನ್ ಪರಮಾಣು ಇದ್ದುದೇ ಆದರೆ ಅಣುತೂಕ 13 ಆಗಿರಬೇಕಿತ್ತು. ಆದರೆ ಅಸಿಟಿಲೀನ್ ಅಣುತೂಕ 26; ಆದ್ದರಿಂದ ಅದರ ಅಣುಸೂತ್ರ ಅ2ಊ2. ಬೆಂಜಿûೕನ್ ಅಣುತೂಕ 78; ಆದ್ದರಿಂದ ಅದರ ಅಣುಸೂತ್ರ ಅ6ಊ6. ಅಣುವಿನಲ್ಲಿರುವ ವಿವಿಧ ಬಗೆಯ ಪರಮಾಣುಗಳ ಸಂಖ್ಯೆಯನ್ನೂ ಸೂಚಿಸುವ ಈ ಅಣುಸೂತ್ರವೇ ಸಂಯುಕ್ತದ ಗುಣಲಕ್ಷಣಗಳನ್ನು ನಿರ್ಧರಿಸುವುದೆಂಬ ಭಾವನೆ ಬಹುಕಾಲ ರೂಢಿಯಲ್ಲಿತ್ತು. ಆಗಾರ್ಯ್‌ನಿಕ್ ರಸಾಯನವಿಜ್ಞಾನ ಜನ್ಮತಾಳಿದ ಪ್ರಾರಂಭದಲ್ಲಿಯೇ ಈ ಭಾವನೆಯನ್ನೂ ಕೈಬಿಡಬೇಕಾಗಿ ಬಂತು. ಸಂಯುಕ್ತಗಳ ಅಣುಸೂತ್ರಗಳು ಒಂದೇ ಇದ್ದರೂ ಅಣುಗಳಲ್ಲಿರುವ ಪರಮಾಣುಗಳ ಜೋಡಣೆಯಲ್ಲಿ ವ್ಯತ್ಯಾಸವಿರಬಹುದಾದ್ದರಿಂದ ಒಂದೇ ಅಣುಸೂತ್ರವಿರುವ ಎರಡು ಅಥವಾ ಅನೇಕ ಸಂಯುಕ್ತಗಳಿರುವುದು ಸಾಧ್ಯ. ಆಗಾರ್ಯ್‌ನಿಕ್ ರಸಾಯನವಿಜ್ಞಾನ ಬೆಳೆದಂತೆಲ್ಲ ಐಸೊಮೆರಿಸಂ ನಿದರ್ಶನಗಳು ಹೇರಳವಾಗಿ ದೊರೆತು ಅದರ ಆಧ್ಯಯನಕ್ಕೆ ಈ ವಿಜ್ಞಾನವಿಭಾಗದಲ್ಲಿ ವಿಶೇಷ ಪ್ರಾಮುಖ್ಯ ಬಂದಿದೆ.
ಐಸೊಮರುಗಳ ಅಣುಗಳಲ್ಲಿರುವ ಬೇರೆ ಬೇರೆ ಬಗೆಯ ಪರಮಾಣುಗಳ ಸಂಖ್ಯೆ ಒಂದೇ ಆಗಿದ್ದು ಅವುಗಳ ಜೋಡಣೆಯಲ್ಲಿ ಮಾತ್ರ ವ್ಯತ್ಯಾಸವಿರುವುದಷ್ಟೆ. ಈ ವ್ಯತ್ಯಾಸ ಎದ್ದುಕಾಣಬಹುದು, ಇಲ್ಲವೆ ಬಲು ಸೂಕ್ಷ್ಮವಾಗಿರಬಹುದು. ಇವನ್ನು ಅನುಸರಿಸಿ ಬಗೆಬಗೆಯ ಐಸೊಮೆರಿಸಂಗಳನ್ನು ಗುರುತಿಸಿ ಅವುಗಳಿಗೆ ಬೇರೆ ಬೇರೆ ಹೆಸರುಗಳನ್ನು ಕೊಟ್ಟಿದ್ದಾರೆ.
ವಿವಿಧ ಬಗೆಯ ಐಸೊಮೆರಿಸಂಗಳನ್ನು ಸ್ಥೂಲವಾಗಿ ಎರಡು ಗುಂಪುಗಳಾಗಿ ವಿಂಗಡಿಸಬಹುದು: 1. ರಚನೀಯ ಐಸೊಮೆರಿಸಂ (ಸ್ಟ್ರಕ್ಚರಲ್ ಐಸೊಮೆರಿಸಂ), 2. ಸ್ಟೀರಿಯೊ ಐಸೊಮೆರಿಸಂ. ಐಸೊಮರುಗಳ ರಚನೆಯಲ್ಲಿಯೇ ವ್ಯತ್ಯಾಸವಿದ್ದರೆ ಅದನ್ನು ರಚನೀಯ ಐಸೊಮೆರಿಸಂ ಎನ್ನುತ್ತಾರೆ. ಇಲ್ಲಿ ರಚನೆ ಎಂಬ ಶಬ್ದವನ್ನು ಒಂದು ವಿಶಿಷ್ಟ ಪಾರಿಭಾಷಿಕ ಅರ್ಥದಲ್ಲಿ ಬಳಸಲಾಗಿದೆ. ಅಣುವಿನಲ್ಲಿರುವ ವಿವಿಧ ಪರಮಾಣುಗಳು, ಪರಮಾಣುಪುಂಜಗಳು ಮತ್ತು ವಿವಿಧ ಬಗೆಯ ಬಂಧಗಳು ಇವುಗಳ ಅನುಕ್ರಮಕ್ಕೆ ರಚನೆ ಎಂದು ಅರ್ಥ. ಉದಾಹರಣೆಗೆ, ಈಥೈಲ್ ಆಲ್ಕೊಹಾಲ್ ಮತ್ತು ಡೈಮೀಥೈಲ್ ಈಥರುಗಳ ರಚನೆಯಲ್ಲಿ ವ್ಯತ್ಯಾಸವಿದೆ.
           ಅಊ3-ಅಊ2-ಔಊ                           ಅಊ3-ಔ-ಅಊ3
    ಈಥೈಲ್ ಆಲ್ಕೊಹಾಲ್          ಡೈಮೀಥೈಲ್ ಈಥರ್
ಇಲ್ಲಿ ಕಾಣಬರುವುದು ರಚನೀಯ ಐಸೊಮೆರಿಸಂ. ಅಂತೆಯೇ ಬ್ಯೂಟೀನ್ (1) ಮತ್ತು ಬ್ಯೂಟೀನ್ (2) ಗಳಲ್ಲಿ ಕಾಣಬರುವುದೂ ರಚನೀಯ ಐಸೊಮೆರಿಸಂ.
       ಅಊ2=ಅಊ-ಅಊ2-ಅಊ3         ಅಊ3-ಅಊ=ಅಊ-ಅಊ3 
       ಬ್ಯೂಟೀನ್(1)               ಬ್ಯೂಟೀನ್(2) 
ಆದರೆ ಈಗ ಬ್ಯೂಟೀನ್ (2) ಸೂತ್ರವನ್ನು ಗಮನಿಸಿ. ಇದೇ ರಚನಾಸೂತ್ರವಿರುವ ಎರಡು ಸಂಯುಕ್ತಗಳಿವೆ. 
ಇವೆರಡರ ರಚನೆ (ಮೇಲೆ ಹೇಳಿದ ವಿಶಿಷ್ಟ ಪಾರಿಭಾಷಿಕ ಅರ್ಥದಲ್ಲಿ) ಒಂದೇ. ಆದರೆ ಇವುಗಳ ಮೂರು ಆಯಾಮಗಳ ಮಾದರಿಗಳನ್ನು (ತ್ರೀಡೈಮೆನ್ಷನಲ್ ಮಾಡೆಲ್ಸ್‌) ಗಣನೆಗೆ ತೆಗೆದುಕೊಂಡಾಗ ಆಕಾಶದಲ್ಲಿ ಪರಮಾಣುಗಳ ಮತ್ತು ಪರಮಾಣು ಪುಂಜಗಳ ಹಂಚಿಕೆ ಬೇರೆಬೇರೆಯಾಗಿದೆ. ಇದು ಸ್ಟೀರಿಯೊ ಐಸೊಮೆರಿಸಂಗೆ ಒಂದು ನಿದರ್ಶನ.
ರಚನೀಯ ಐಸೊಮೆರಿಸಂ: ವಿವಿಧ ಬಗೆಯ ರಚನೀಯ ಐಸೊಮೆರಿಸಂಗಳನ್ನು ಪುನಃ ಎರಡು ಗುಂಪುಗಳಾಗಿ ವಿಂಗಡಿಸಬಹುದು. 
ಮೊದಲನೆಯದು ವರ್ತನಾ ಐಸೊಮೆರಿಸಂ (ಫಂಕ್ಷನಲ್ ಐಸೊಮೆರಿಸಂ). ಈ ಬಗೆಯ ಐಸೊಮೆರಿಸಂನಲ್ಲಿ ಐಸೊಮರುಗಳಿಗಿರುವ ವ್ಯತ್ಯಾಸ ಗಮನಾರ್ಹವಾದದ್ದು. ಅಂದರೆ ಅವುಗಳ ರಚನೆಗಳಲ್ಲಿರುವ ತೀವ್ರ ವ್ಯತ್ಯಾಸದ ಪರಿಣಾಮವಾಗಿ ಒಂದೊಂದರಲ್ಲೂ ಬೇರೆ ಬೇರೆ ಬಗೆಯ ಪರಮಾಣುಪುಂಜಗಳೋ ಬೇರೆ ಬೇರೆ ಬಗೆಯ ಬಂಧಗಳೋ ಇದ್ದು ಅವುಗಳ ರಾಸಾಯನಿಕ ವರ್ತನೆಯಲ್ಲಿ ಗಣನೀಯ ವ್ಯತ್ಯಾಸವಿರುತ್ತದೆ. ಐಸೊಮರುಗಳು ಬೇರೆ ಬೇರೆ ವರ್ಗದ ಸಂಯುಕ್ತಗಳೇ. ಈ ಹಿಂದೆ ಉದಾಹರಣೆಯಾಗಿ ಕೊಟ್ಟ ಈಥೈಲ್ ಆಲ್ಕೊಹಾಲ್-ಡೈಮೀಥೈಲ್ ಈಥರುಗಳ ಐಸೊಮೆರಿಸಂ ಈ ಬಗೆಯದೇ. ಗಮನ ಸೆಳೆವಂಥ ಇನ್ನೊಂದು ನಿದರ್ಶನವನ್ನು ಕೊಡುವುದಾದರೆ ನೈಟ್ರೊ ಟಾಲ್ವೀನ್ ಮತ್ತು ಆಂಥ್ರಸಿಲಿಕ್ ಆಮ್ಲಗಳನ್ನು ಹೆಸರಿಸಬಹುದು. 
ಎರಡರ ಅಣುಸೂತ್ರವೂ ಒಂದೇ, ಅ7ಊ7ಓಔ2. ಆದರೆ ಒಂದು ನೈಟ್ರೊ ಸಂಯುಕ್ತ, ಇನ್ನೊಂದರಲ್ಲಿ ಆಮ್ಲೀಯ ಗುಣದ ಕಾರ್ಬಾಕ್ಸಿಲ್ ಪುಂಜವೂ ಪ್ರತ್ಯಾಮ್ಲೀಯ ಗುಣದ ಅಮೈನೊ ಪುಂಜವೂ ಇರುವುದರಿಂದ ಈ ಎರಡು ಸಂಯುಕ್ತಗಳ ರಾಸಾಯನಿಕ ವರ್ತನೆಯಲ್ಲಿ ಬಹಳ ವ್ಯತ್ಯಾಸವಿದೆ.
ಟಾಟೊಮೆರಿಸಂ : ಕೆಲವೊಮ್ಮೆ ಒಂದು ನಿರ್ದಿಷ್ಟ ಸಂಯುಕ್ತದ ಗುಣಲಕ್ಷಣಗಳನ್ನು ಪರಿಶೀಲಿಸಿದಾಗ ಅದರ ಕೆಲವು ರಾಸಾಯನಿಕ ಗುಣಗಳನ್ನು ಒಂದು ರಚನೆಯ ಆಧಾರದ ಮೇಲೂ ಇನ್ನೂ ಕೆಲವು ರಾಸಾಯನಿಕ ಗುಣಗಳನ್ನು ಬೇರೊಂದು ರಚನೆಯ ಆಧಾರದ ಮೇಲೂ ವಿವರಿಸುವುದು ಸಾಧ್ಯವಾಗುತ್ತದೆ. ವಾಸ್ತವವಾಗಿ ಆ ಸಂಯುಕ್ತದಲ್ಲಿ ಬೇರೆ ಬೇರೆ ರಚನೆಯಿರುವ ಎರಡು ಬಗೆಯ ಅಣುಗಳಿದ್ದು ಅವು ಸತತವಾಗಿ ಪರಸ್ಪರ ಪರಿವರ್ತನೆ ಹೊಂದುತ್ತಿರುತ್ತವೆ. ಉದಾಹರಣೆಗೆ ಅಸಿಟೊ ಅಸಿಟಿಕ್ ಆಮ್ಲದ ಈಥೈಲ್ ಎಸ್ಟರ್, ಇದರ ಕೆಲವು ಗುಣಲಕ್ಷಣಗಳನ್ನು ಗಮನಿಸಿದರೆ ಇದರಲ್ಲಿ ಕೀಟೊ ಪುಂಜವಿರುವಂತೆ ಕಂಡುಬರುತ್ತದೆ ಅಊ3.ಅಔ.ಅಊ2.ಅಔಔಅ2.ಊ5, ಇನ್ನೂ ಕೆಲವು ಗುಣಲಕ್ಷಣಗಳನ್ನು ಗಮನಿಸಿದರೆ ಇದರಲ್ಲಿ ಒಂದು ದ್ವಿಬಂಧವೂ (ಡಬಲ್ ಬಾಂಡ್) ಒಂದು ಹೈಡ್ರಾಕ್ಸಿಲ್ ಪುಂಜವೂ ಇರುವಂತೆ ಕಂಡುಬರುತ್ತದೆ.
		ಅಊ3-ಅ=ಅಊ-ಅಔಔಅ2ಊ5
		  ಳಿ
		 ಔಊ	
ವಾಸ್ತವವಾಗಿ ಈ ಸಂಯುಕ್ತದಲ್ಲಿ ಈ ಎರಡು ಬಗೆಯ ಅಣುಗಳೂ ಇದ್ದು ಸತತವಾಗಿ ಒಂದು ಇನ್ನೊಂದು ಪರಿವರ್ತನೆ ಹೊಂದುತ್ತ ಗತಿ ಸಮತೋಲ (ಡೈನಮಿಕ್ ಈಕ್ವಿಲಿಬ್ರಿಯಮ್) ಸ್ಥಿತಿಯಲ್ಲಿರುತ್ತವೆ.
ಅಊ3-ಅಔ-ಅಊ2-ಅಔಔಅ2ಊ5ಅಊ3-ಅ=ಅಊ-ಅಔಔಅ2ಊ5
			           ಳಿ
			             ಔಊ
ಈ ಬಗೆಯ ಐಸೊಮೆರಿಸಂಗೆ ಟಾಟೊಮೆರಿಸಂ ಅಥವಾ ಗತಿ ಐಸೊಮೆರಿಸಂ (ಡೈನಾಮಿಕ್ ಐಸೊಮೆರಿಸಂ) ಎಂದು ಹೆಸರು.
ಎರಡನೆಯದು, ಐಸೊಮರುಗಳಲ್ಲಿ ಒಂದೇ ಬಗೆಯ ಪುಂಜಗಳೇ ಇದ್ದು ಸಂಯುಕ್ತಗಳ ರಾಸಾಯನಿಕ ವರ್ತನೆಯಲ್ಲಿ ಗಮನಾರ್ಹ ವ್ಯತ್ಯಾಸವೇನೂ ಇಲ್ಲದಿರುವ ರಚನೀಯ ಐಸೊಮೆರಿಸಂ ಸಾಧ್ಯ. ಅಂಥ ಐಸೊಮೆರಿಸಂಗಳನ್ನು ಈಗ ಪರಿಶೀಲಿಸಬಹುದು.
ಸರಣಿ (ಚೈನ್) ಐಸೊಮೆರಿಸಂ : ಆಗಾರ್ಯ್‌ನಿಕ್ ಸಂಯುಕ್ತಗಳ ಅಣುಗಳಲ್ಲಿ ಹೈಡ್ರೋಜನ್, ಆಕ್ಸಿಜನ್, ನೈಟ್ರೋಜನ್ ಮುಂತಾದ ಪರಮಾಣುಗಳನ್ನು ಗಣನೆಗೆ ತೆಗೆದುಕೊಳ್ಳದೆ, ಆ ಅಣುಗಳ ರಚನೆಗೆ ಆಧಾರಪ್ರಾಯವಾಗಿರುವ ಕಾರ್ಬನ್ ಪರಮಾಣುಗಳ ಸರಣಿಯ ಮೇಲೆ ನಮ್ಮ ದೃಷ್ಟಿಯನ್ನು ಕೇಂದ್ರೀಕರಿಸೋಣ. ಐಸೊಮರುಗಳು ಈ ಕಾರ್ಬನ್ ಚೌಕಟ್ಟುಗಳಲ್ಲೇ ವ್ಯತ್ಯಾಸವಿದ್ದರೆ ಅದಕ್ಕೆ ಸರಣಿ ಐಸೊಮೆರಿಸಂ ಎಂದು ಹೆಸರು. ಆಲ್ಕೇನ್ ವರ್ಗದ ಹೈಡ್ರೋಕಾರ್ಬನುಗಳಲ್ಲಿ ಈ ಬಗೆಯ ಐಸೊಮೆರಿಸಂ ಪಾತ್ರ ಹೆಚ್ಚು. ಬ್ಯೂಟೇನಿನಲ್ಲಿ (ಅ4ಊ10) ಎರಡು ಐಸೊಮರ್ ಸಾಧ್ಯ.
                                                                                  ಅಊ3
                                                                                  ಳಿ
ಅಊ3-ಅಊ2-ಅಊ2ಅಊ3		                  ಅಊ3-ಅಊ-ಅಊ3
ಬ್ಯೂಟೇನ್			 ಐಸೊಬ್ಯೂಟೇನ್
ಈ ಅಣುಗಲ್ಲಿನ ಕಾರ್ಬನ್ ಪರಮಾಣು ಸರಣಿಗಳ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುವುದಾದರೆ 
ಅ-ಅ-ಅ-ಅ			                                  ಅ
  ಬ್ಯೂಟೇನ್			                  |
			                            ಅ-ಅ-ಅ
ಐಸೊಬ್ಯೂಟೇನ್ ಪೆಂಟೇನಿನಲ್ಲೆ ಮೂರು ಐಸೊಮರುಗಳು ಸಾಧ್ಯ.
					               ಅಊ3
					                 |
                                                     ಅಊ3-ಅಊ-ಅಊ2-ಅಊ3     ಅಊ3-ಅ-ಅಊ3
                                                               |                         |
    ಅಊ3-ಅಊ2-ಅಊ2-ಅಊ2-ಅಊ3	              ಅಊ3		ಅಊ3
    ಪೆಂಟೇನ್	           ಐಸೊಪೆಂಟೇನ್      ನಿಯೊಪೆಂಟೇನ್
ಹೀಗೆಯೇ ಹೆಕ್ಸೇನ್ ಅ6ಊ14ರಲ್ಲಿ ಐದು, ಅ7ಊ16ರಲ್ಲಿ ಒಂಬತ್ತು, ಅ8ಊ18 ರಲ್ಲಿ ಹದಿನೆಂಟು ಮತ್ತು ಅ9ಊ20 ಮೂವತ್ತೈದು ಐಸೊಮರುಗಳು ಸಾಧ್ಯ. ಇಲ್ಲಿ ಕಾರ್ಬನ್ ಪರಮಾಣುಗಳ ಸಂಖ್ಯೆ ಹೆಚ್ಚಾಗುತ್ತ ಹೋದಂತೆ ಐಸೊಮರುಗಳ ಸಂಖ್ಯೆ ಅಗಾಧವಾಗಿ ಬೆಳೆಯುತ್ತದೆ. ಅ20ಊ42 ಸೂತ್ರದ ಆಲ್ಕೇನಿನಲ್ಲಿ 3,66,319 ಐಸೊಮರುಗಳೂ ಅ40ಊ82 ಸೂತ್ರದ ಆಲ್ಕೇನಿನಲ್ಲಿ 6.25x1013 ಐಸೊಮರುಗಳೂ ಸಾಧ್ಯವೆಂದು ಗಣಿತದ ಸಹಾಯದಿಂದ ಲೆಕ್ಕ ಹಾಕಿದ್ದಾರೆ. ಆದರೆ ಅವುಗಳಲ್ಲಿ ಕೆಲವನ್ನು ಮಾತ್ರ ತಯಾರಿಸಲಾಗಿದೆ.
ಮೆಟಮೆರಿಸಂ : ದ್ವಿವೇಲೆನ್ಸೀಯ (ಡೈವೆಲೆಂಟ್) ಅಥವಾ ತ್ರಿವೇಲೆನ್ಸೀಯ (ಟ್ರೈವೆಲೆಂಟ್) ಪರಮಾಣು ಅಥವಾ ಪರಮಾಣುಪುಂಜವೊಂದು ವಿವಿಧ ಉದ್ದಗಳ ಕಾರ್ಬನ್ ಸರಣಿಗಳಿಗೆ ಬಂಧಿತವಾಗಿ ಐಸೊಮರುಗಳನ್ನು ಉತ್ಪತ್ತಿಮಾಡಬಹುದು. ಈಥರುಗಳು, ಕೀಟೋನುಗಳು ಮತ್ತು ಅಮೀನುಗಳಲ್ಲಿ ಈ ಬಗೆಯ ಐಸೊಮೆರಿಸಂ ನಾವು ಕಾಣುತ್ತೇವೆ. ಉದಾಹರಣೆಗೆ
(i) ಅಊ3-ಅಊ2-ಔ-ಅಊ2-ಅಊ3                   ಅಊ3-ಔ-ಅಊ2-ಅಊ2-ಅಊ3
   ಡೈ ಈಥೈಲ್ ಈಥರ್            ಮೀಥೈಲ್ ಪ್ರೋಪೈಲ್ ಈಥರ್
(ii) ಅಊ3-ಅಊ2-ಅಔ-ಅಊ2-ಅಊ2-ಅಊ3     ಅಊ3-ಅಔ-ಅಊ2-ಅಊ2-ಅಊ2-ಅಊ3  
   ಈಥೈಲ್ ಪ್ರೋಪೈಲ್ ಕೀಟೋನ್        ಮೀಥೈಲ್ ಬ್ಯೂಟೈಲ್, ಕೀಟೋನ್
                 ಅಊ3                                
	           |
                      ಅಊ2                                            ಅಊ3 
               |                         |      
(iii) ಅಊ3-ಅಊ2-ಓ-ಅಊ2-ಅಊ3         ಅಊ3-ಅಊ2-ಓ-ಅಊ2-ಅಊ2-ಅಊ3      
   ಟ್ರೈ ಈಥೈಲ್ ಅಮೀನ್            ಮೀಥೈಲ್ ಈಥೈಲ್, ಪ್ರೋಪೈಲ್,
                                      ಅಮೀನ್     
               ಅಊ3
                  |              
                  ಅಊ3-ಓ-ಅಊ2-ಅಊ2-ಅಊ2-ಅಊ3             
             ಡೈ ಮೀಥೈಲ್ ಬ್ಯೂಟೈಲ್ ಅಮೀನ್
ಈ ಬಗೆಯ ಐಸೊಮೆರಿಸಂಗೆ ಮೆಟಮೆರಿಸಂ ಎಂದು ಹೆಸರು.
ಸ್ಥಾನೀಯ (ಪೊಸಿಷನ್) ಐಸೊಮೆರಿಸಂ: ಈ ಬಗೆಯ ಐಸೊಮರುಗಳಲ್ಲಿ ಒಂದು ನಿರ್ದಿಷ್ಟ ಪರಮಾಣು ಅಥವಾ ಪರಮಾಣು ಪುಂಜದ ಇಲ್ಲವೇ ಒಂದು ನಿರ್ದಿಷ್ಟ ಬಂಧದ ಸ್ಥಾನ ಬೇರೆಬೇರೆಯಾಗಿರುತ್ತದೆ. ಆದ್ದರಿಂದಲೇ ಈ ಬಗೆಯ ಐಸೊಮೆರಿಸಂಗೆ ಸ್ಥಾನೀಯ ಐಸೊಮೆರಿಸಂ ಎಂದು ಹೆಸರು. ಉದಾಹರಣೆಗೆ, 
     ಅಊ3-ಅಊ2-ಅಊ2-ಔಊ             ಅಊ3-ಅಊ-ಅಊ3  
     ಪ್ರೊಪೈಲ್ ಆಲ್ಕೊಹಾಲ್                |
                                              		                                             ಔಊ      
                          ಐಸೊಪ್ರೋಪೈಲ್ ಆಲ್ಕೊಹಾಲ್  
ಬ್ಯೂಟೀನ್ (1) ಬ್ಯೂಟೀನ (2)ಗಳ ಐಸೊಮೆರಿಸಂ ಈ ಬಗೆಯದೇ. ಇಲ್ಲಿ ದ್ವಿಬಂಧದ ಸ್ಥಾನದಲ್ಲಿ ವ್ಯತ್ಯಾಸವಿದೆ.
ಚಕ್ರೀಯ ಸಂಯುಕ್ತಗಳಲ್ಲಿ (ಸೈಕಿಕ್ ಕಾಂಪೌಂಡ್ಸ್‌) ಇನ್ನೊಂದು ಬಗೆಯ ಸ್ಥಾನೀಯ ಐಸೊಮೆರಿಸಮನ್ನು ಕಾಣುತ್ತೇವೆ. ಇಲ್ಲಿ ಯಾವುದೇ ಒಂದು ಆದೇಶದ (ಸಬ್ಸ್ಟಿಟ್ಯುಎಂಟ್) ಸ್ಥಾನ ಬೇರೆಬೇರೆಯಾಗಿರುವುದಿಲ್ಲ. ಎರಡು ಅಥವಾ ಅನೇಕ ಆದೇಶಗಳ ಸಾಪೇಕ್ಷಸ್ಥಾನ ಬೇರೆಬೇರೆಯಾಗಿರುತ್ತದೆ. ಬೆನ್ಜಿûನ್ಜನ್ಯ ಸಂಯುಕ್ತಗಳಲ್ಲಿ ಈ ಬಗೆಯ ಐಸೊಮೆರಿಸಂ ಸರ್ವೇಸಾಮಾನ್ಯ. ಉದಾಹರಣೆಗೆ
ಸ್ಟೀರಿಯೊ ಐಸೊಮೆರಿಸಂ : ಅಣುರಚನೆ ಒಂದೇ ಇದ್ದು ಪರಮಾಣು ಮತ್ತು ಪರಮಾಣು ಪುಂಜಗಳ ಮೂರು ಆಯಾಮಗಳ ಹಂಚಿಕೆಯಲ್ಲಿ (ತ್ರೀಡೈಮೆನ್ಷನಲ್ ಡಿಸ್ಟ್ರಿಬ್ಯೂಷನ್) ವ್ಯತ್ಯಾಸವಿದ್ದರೆ ಅದಕ್ಕೆ ಸ್ಟೀರಿಯೊ ಐಸೊಮೆರಿಸಂ ಎಂದು ಕರೆಯುತ್ತಾರೆಂದು ಈಗಾಗಲೇ ಹೇಳಿದೆಯಷ್ಟೆ. ಇದರಲ್ಲಿ ಮುಖ್ಯವಾಗಿ ಎರಡು ಬಗೆ. ದ್ಯುತಿ ಐಸೊಮೆರಿಸಂ (ಆಪ್ಟಿಕಲ್ ಐಸೊಮೆರಿಸಂ) ಮತ್ತು ಜ್ಯಾಮಿತೀಯ ಐಸೊಮೆರಿಸಂ (ಜೊಮೆಟ್ರಿಕಲ್ ಐಸೊಮೆರಿಸಂ).
ದ್ಯುತಿ ಐಸೊಮೆರಿಸಂ : ಈ ಬಗೆಯ ಐಸೊಮರುಗಳ ಗುಣಲಕ್ಷಣಗಳಲ್ಲಿ ಕಂಡುಬರುವ ಮುಖ್ಯ ವ್ಯತ್ಯಾಸಧ್ರುವೀಕೃತ ಬೆಳಕಿನೊಡನೆ (ಪೋಲರೈಸ್ಡ್‌ ಲೈಟ್) ಅವು ವರ್ತಿಸುವ ರೀತಿಯಲ್ಲಿ. ಸಮತಲ ಧ್ರುವೀಕೃತ ಬೆಳಕಿನ (ಪ್ಲೇನ್ ಪೋಲರೈಸ್ಡ್‌ ಲೈಟ್) ರಶ್ಮಿಯನ್ನು ಆ ಸಂಯುಕ್ತಗಳ ಹರಳಿನ ಮೂಲಕ ಅಥವಾ ಅವುಗಳ ದ್ರಾವಣಗಳ ಮೂಲಕ ಹಾಯಿಸಿದರೆ ಧ್ರುವೀಕರಣ ಸಮತಲ (ಪ್ಲೇನ್ ಆಫ್ ಪೋಲರೈಸೇಷನ್) ಬಲಕ್ಕಾಗಲಿ ಎಡಕ್ಕಾಗಲಿ ತಿರುಗುತ್ತದೆ. ಧ್ರುವೀಕರಣ ಸಮತಲವನ್ನು ತಿರುಗಿಸಬಲ್ಲ ಸಂಯುಕ್ತ ದ್ಯುತಿಪಟುತ್ವ (ಆಪ್ಟಿಕಲ್ ಆಕ್ಟಿವಿಟಿ) ಉಳ್ಳದ್ದು ಎನ್ನಿಸಿಕೊಳ್ಳುತ್ತದೆ. ಹಾಗೆ ತಿರುಗುವ ಕೋನ ಈ ಐಸೊಮರುಗಳಲ್ಲಿ ಬೇರೆಬೇರೆಯಾಗಿರುತ್ತದೆ. ಈ ಕಾರಣದಿಂದಲೇ ಈ ಬಗೆಯ ಐಸೊಮೆರಿಸಂಗೆ ದ್ಯುತಿ ಐಸೊಮೆರಿಸಂ ಎಂಬ ಹೆಸರು ಬಂದಿರುವುದು.
ದ್ಯುತಿ ಐಸೊಮೆರಿಸಂನ ವಿಶದವಾದ ಚರ್ಚೆಗೆ ಪ್ರವೇಶಿಸುವ ಮೊದಲು ಸಮಾಂಗತೆ (ಸಿಮೆಟ್ರಿ) ಎಂಬುದರ ಅರ್ಥವನ್ನು ವಿವರಿಸುವುದು ಅಗತ್ಯ. ಒಂದು ಕಾಯ ಸಮಾಂಗವಾಗಿದ್ದರೆ (ಸಿಮೆಟ್ರಿಕಲ್) ಅದೂ ಅದರ ಕನ್ನಡಿಯ ಬಿಂಬವೂ (ಮಿರರ್ ಇಮೇಜ್) ಅನನ್ಯ (ಐಡೆಂಟಿಕಲ್). ಅಂದರೆ ಒಂದರ ಮೇಲೊಂದನ್ನಿಟ್ಟರೆ ಅವು ಸರಿಯಾಗಿ ಹೊಂದಿಕೊಳ್ಳುತ್ತವೆ. ಆ ಕಾಯ ಅಸಮಾಂಗವಾಗಿದ್ದರೆ (ಅಸಿಮೆಟ್ರಿಕಲ್) ಅದರ ಕನ್ನಡಿಯ ಬಿಂಬ ಮೊದಲ ನೋಟಕ್ಕೆ ಅದರಂತೆಯೇ ಕಂಡರೂ ಅವು ಅನನ್ಯವಲ್ಲ. ಇದಕ್ಕೆ ನಮ್ಮ ಕೈ ಬಲು ಒಳ್ಳೆಯ ಉದಾಹರಣೆ. ಎಡಗೈ ಕನ್ನಡಿಯ ಬಿಂಬ ಬಲಗೈ. ಮೊದಲ ನೋಟಕ್ಕೆ ಎರಡೂ ಒಂದೇ ಎಂಬಂತೆ ಕಂಡರೂ ಅವೆರಡೂ ಬೇರೆಬೇರೆ. ಇದಕ್ಕೆ ಕಾರಣ ಕೈ ಅಸಮಾಂಗ ಕಾಯ.
ಕೆಲವು ವೇಳೆ ಒಂದು ಸಂಯುಕ್ತದ ಅಣು ಯಾವುದೇ ಕಾರಣದಿಂದ ಅಸಮಾಂಗವಾಗಿರಬಹುದು. ಆಗ ಅದೂ ಕನ್ನಡಿಯ ಬಿಂಬದ ರೂಪವಿರುವ ಅಣುವೂ ಅನನ್ಯವಾಗಿರದೆ ಒಂದರಿಂದೊಂದು ಭಿನ್ನವಾಗಿರುತ್ತವೆ. ಈ ರೀತಿ ಅಣು ಅಸಮಾಂಗವಾಗಿರಲು ಸಾಮಾನ್ಯವಾಗಿ ಕಾಣಬರುವ ಒಂದು ಕಾರಣ ಅದರಲ್ಲಿರುವ ಯಾವುದೊ ಒಂದು ಕಾರ್ಬನ್ ಪರಮಾಣು ನಾಲ್ಕು ಬೇರೆ ಬೇರೆ ಪರಮಾಣು ಅಥವಾ ಪರಮಾಣುಪುಂಜಗಳಿಗೆ ಬಂಧಿತವಾಗಿರುವುದು. ಉದಾಹರಣೆಗೆ, ಲ್ಯಾಕ್ಟಿಕ್ ಆಮ್ಲದ ಅಣುವನ್ನು ಪರಿಶೀಲಿಸಿ.
ಊ
|
      ಅಊ3-ಅ-ಅಔಔಊ
|
ಔಊ      
ಅದರಲ್ಲಿ ಒಂದು ಕಾರ್ಬನ್ ಪರಮಾಣು ಅಊ3,ಊ,ಔಊ ಮತ್ತು ಅಔಔಊಗಳಿಗೆ ಬಂಧಿತವಾಗಿದೆ. ಕಾರ್ಬನ್ ಪರಮಾಣು ಸಮಚತುರ್ಮುಖಿಯೊಂದರ (ರೆಗ್ಯುಲರ್ ಟೆಟ್ರಹೆಡ್ರನ್) ಜ್ಯಾಮಿತೀಯ ಕೇಂದ್ರದಲ್ಲಿದ್ದು (ಜೊಮೆಟ್ರಿಕ್ ಸೆಂಟರ್) ಅದರ ನಾಲ್ಕು ವೇಲೆನ್ಸಿಗಳೂ ಚತುರ್ಮುಖಿಯ ನಾಲ್ಕು ಮೂಲೆಗಳ ಕಡೆ ಗುರಿ ಮಾಡಿಕೊಂಡಿವೆಯೆಂದು ನಂಬಲಾಗಿದೆ. ಇದರ ಆಧಾರದ ಮೇಲೆ ಲ್ಯಾಕ್ಟಿಕ್ ಆಮ್ಲದ ಅಣುವಿನ ಮಾದರಿಯನ್ನು ರೂಪಿಸಿಕೊಂಡರೆ ಅದು ಅಸಮಾಂಗವಾಗಿರುವುದನ್ನು ನೋಡಬಹುದು. ಒಂದಕ್ಕೊಂದು ಕನ್ನಡಿಯ ಬಿಂಬದಂತಿರುವ ಎರಡು ಲ್ಯಾಕ್ಟಿಕ್ ಆಮ್ಲದ ಅಣುಮಾದರಿಗಳು ಸಾಧ್ಯ. ನಿರೀಕ್ಷಿಸಿದಂತೆ ಲ್ಯಾಕ್ಟಿಕ್ ಆಮ್ಲದ ಎರಡು ಐಸೊಮರುಗಳು ನಮಗೆ ದೊರೆತಿವೆ. ಇವುಗಳ ಗುಣಲಕ್ಷಣಗಳಿಗಿರುವ ವ್ಯತ್ಯಾಸ ಅತ್ಯಲ್ಪ. (i) ಅವುಗಳ ಹರಳುಗಳೂ ಒಂದಕ್ಕೊಂದು ಕನ್ನಡಿಯ ಬಿಂಬದಂತಿರುತ್ತವೆ. (ii) ಜೀವಿಗಳ ಮೇಲೆ ಅವು ಕೆಲವು ವೇಳೆ ಭಿನ್ನ ಪರಿಣಾಮ ಬೀರುತ್ತವೆ. (iii) ಒಂದು ಐಸೊಮರ್ ಧ್ರುವೀಕೃತ ಬೆಳಕಿನ ಸಮತಲವನ್ನು ಬಲಕ್ಕೆ ತಿರುಗಿಸಿದರೆ, ಅಂದರೆ ದಕ್ಷಿಣಾವರ್ತವಾದರೆ (ಡೆಕ್ಸ್ಟ್ರೋರೊಟೇಟರಿ) ಇನ್ನೊಂದು ವಾಮಾವರ್ತ (ಲೇವೋ ರೋಟೇಟರಿ). ಇಂಥ ಒಂದು ಜೊತೆ ಐಸೊಮರುಗಳಿಗೆ ಎನಾನ್ಷಿಯೋಮರುಗಳು ಅಥವಾ ದ್ಯುತಿಪ್ರತೀಪಕಗಳು (ಆಪ್ಟಿಕಲ್ ಆಂಟಿಮೋಡ್ಸ್‌) ಎಂದು ಹೆಸರು.
ನಾಲ್ಕು ಬೇರೆ ಬೇರೆ ಪರಮಾಣು ಅಥವಾ ಪರಮಾಣುಪುಂಜಗಳಿಗೆ ಬಂಧಿತವಾಗಿರುವ ಕಾರ್ಬನ್ ಪರಮಾಣುವು, ಅಣುವನ್ನು ಅಸಮಾಂಗವಾಗಿಸುವುದರಿಂದ ಅಂಥ ಕಾರ್ಬನ್ ಪರಮಾಣುವನ್ನೇ ಸಾಮಾನ್ಯವಾಗಿ ಅಸಮಾಂಗ ಕಾರ್ಬನ್ ಪರಮಾಣು ಎನ್ನುವುದು ವಾಡಿಕೆ. ಒಂದು ಅಣು ಅಸಮಾಂಗವಾಗಲು ಅದರಲ್ಲಿ ಇಂಥ ಅಸಮಾಂಗ ಕಾರ್ಬನ್ ಪರಮಾಣು ಇರಲೇ ಬೇಕಾದುದಿಲ್ಲ. ಕೆಲವು ವೇಳೆ ಬೇರೆ ಕಾರಣಗಳಿಂದಲೂ ಅಣು ಅಸಮಾಂಗವಾಗಬಹುದು. ಅಂಥ ಒಂದು ನಿದರ್ಶನವನ್ನು ಇಲ್ಲಿ ಕೊಡಬಹುದು.
ಒಂದು ಕಾರ್ಬನ್ ಪರಮಾಣು ಎರಡು ಕಡೆಯೂ ಎರಡು ಕಾರ್ಬನ್ ಪರಮಾಣುಗಳಿಗೆ ದ್ವಿಬಂಧಗಳಿಂದ ಬಂಧಿತವಾಗಿದ್ದು ಆ ಎರಡು ಪರಮಾಣುಗಳು ಒಂದೊಂದೂ ಎರಡು ಭಿನ್ನ ಪರಮಾಣು ಪುಂಜಗಳಿಗೆ ಬಂಧಿತವಾಗಿದ್ದರೆ ಅಂಥ ಅಣು ಅಸಮಾಂಗವಾಗುತ್ತದೆ. ಪರಿಣಾಮವಾಗಿ ಅದೇ ರಚನೆ ಇರುವ ಆದರೆ ಒಂದಕ್ಕೊಂದು ಕನ್ನಡಿ ಬಿಂಬಗಳಂತಿರುವ ಎರಡು ಮಾದರಿ ಸಾಧ್ಯವಾಗುತ್ತದೆ.
ಒಂದೇ ಅಣುವಿನಲ್ಲಿ ಒಂದಕ್ಕಿಂತ ಹೆಚ್ಚು ಅಸಮಾಂಗ ಕಾರ್ಬನ್ ಪರಮಾಣುಗಳಿದ್ದರೆ ಎರಡಕ್ಕಿಂತ ಹೆಚ್ಚು ಸಂಖ್ಯೆಯ ದ್ಯುತಿ ಐಸೊಮರುಗಳು ಸಾಧ್ಯ. ಉದಾಹರಣೆಗೆ, ಎರಡು ಅಸಮಾಂಗ ಕಾರ್ಬನ್ ಪರಮಾಣುಗಳಿರುವ ಒಂದು ಅಣುವನ್ನು ತೆಗೆದುಕೊಳ್ಳೋಣ. ಪರಮಾಣು ಮತ್ತು ಪರಮಾಣು ಪುಂಜಗಳ ಮೂರು ಆಯಾಮಗಳ ಹಂಚಿಕೆ ಬೇರೆಬೇರೆಯಾಗಿರುವ ಅದರ ಮಾದರಿಗಳನ್ನು ಸಮತಲ ಪ್ರಕ್ಷೇಪಣಗಳಿಂದ (ಪ್ಲೇನ್ ಪ್ರೊಜೆಕ್ಷನ್ಸ್‌) ಸೂಚಿಸಬಹುದಾದರೆ ಈ ಕೆಳಗೆ ಕಾಣುವ ನಾಲ್ಕು ಐಸೊಮರುಗಳು ಸಾಧ್ಯವಾಗುತ್ತವೆ.
         ಥಿ		   ಥಿ		 ಥಿ	              ಥಿ
          I		    I		  I	               I
      ಚಿ-ಛಿ-b		b-ಛಿ-ಚಿ	              ಚಿ-ಛಿ-b	           b-ಛಿ-ಚಿ
          I		    I		  I	               I
      ಚಿ-ಛಿ-b		ಚಿ-ಛಿ-b	              b-ಛಿ-ಚಿ	           b-ಛಿ-ಚಿ
          I		    I		  I	               I
         x		   x		 x	              x
ಇವುಗಳಲ್ಲಿ ಮೊದಲನೆಯದು ಮತ್ತು ನಾಲ್ಕನೆಯದು ಒಂದಕ್ಕೊಂದು ಕನ್ನಡಿಯ ಬಿಂಬಗಳು. ಆದ್ದರಿಂದ ಅವು ದ್ಯುತಿಪ್ರತೀಪಕಗಳು. ಒಂದು ದಕ್ಷಿಣಾವರ್ತವಾದರೆ ಇನ್ನೊಂದು ಅಷ್ಟೇ ಪ್ರಮಾಣದಲ್ಲಿ ವಾಮಾವರ್ತ. ಹಾಗೆಯೇ ಎರಡನೆಯದು ಮತ್ತು ಮೂರನೆಯದು ದ್ಯುತಿಪ್ರತೀಪಕಗಳು. ಇಲ್ಲಿ ಮೊದಲನೆಯದು ಮತ್ತು ಎರಡನೆಯದು ದ್ಯುತಿ ಐಸೊಮರುಗಳಾದರೂ (ಅಂದರೆ, ಒಂದೇ ರಚನೆಯಿದ್ದು, ದ್ಯುತಿಪಟುತ್ವ ಬೇರೆ ಬೇರೆ ಇರುವ ಐಸೊಮರುಗಳು) ಅವು ದ್ಯುತಿ ಪ್ರತೀಪಕಗಳಲ್ಲ. ಇಂಥ ಐಸೊಮರುಗಳಿಗೆ ಡಯಾಸ್ಟೀರಿಯೊ ಐಸೊಮರುಗಳೆಂದು ಹೆಸರು.
ಒಂದು ಅಣುವಿನಲ್ಲಿ ಟಿ ಅಸಮಾಂಗ ಕಾರ್ಬನ್ ಪರಮಾಣುಗಳಿದ್ದರೆ ಅಂಥ ಅಣುವಿನಲ್ಲಿ 2ಟಿ ಮೂರು ಆಯಾಮಗಳ ಮಾದರಿಗಳು ಸಾಧ್ಯ ಎಂದು ಲೆಕ್ಕಹಾಕಿ ತೋರಿಸಬಹುದು. ಅವುಗಳಲ್ಲಿ ದ್ಯುತಿಪ್ರತೀಪಕಗಳಾಗಿರುವ ಜೋಡಿಗಳನ್ನು ಲೆಕ್ಕಹಾಕಿದರೆ ಅದರ ಅರ್ಧಸಂಖ್ಯೆ ಜೋಡಿಗಳಿರುತ್ತವೆ. ಅಂದರೆ 2ಟಿ-1 ಜೋಡಿ ದ್ಯುತಿ ಪ್ರತೀಪಕಗಳಿರುತ್ತವೆ.
ಜ್ಯಾಮಿತೀಯ ಐಸೊಮೆರಿಸಂ : ಎರಡು ಕಾರ್ಬನ್ ಪರಮಾಣುಗಳ ಮಧ್ಯೆ ಒಂದೇ ಬಂಧವಿದ್ದರೆ ಆ ಬಂಧವನ್ನೇ ಅಕ್ಷವಾಗಿ ಮಾಡಿಕೊಂಡು ಅಣು ತಿರುಗಲು ಸಾಧ್ಯ. ಅವೆರಡರ ನಡುವೆ ದ್ವಿಬಂಧ ಏರ್ಪಟ್ಟರೆ ಆ ತೆರನ ಭ್ರಮಣ ಸಾಧ್ಯವಾಗುವುದಿಲ್ಲ. ಆಗ ಕಾರ್ಬನ್ ವೇಲೆನ್ಸಿಗಳ ಚತುರ್ಮುಖೀಯ ಹಂಚಿಕೆಯ ಪರಿಣಾಮವಾಗಿ ಎರಡು ಕಾರ್ಬನ್ ಪರಮಾಣುಗಳೂ ದ್ವಿಬಂಧವೂ ಒಂದು ಸಮತಲದಲ್ಲಿದ್ದು ಆ ಪರಮಾಣುಗಳ ಉಳಿದ ಎರಡು ವೇಲೆನ್ಸಿಗಳು ಸಮತಲದ ಆ ಕಡೆ ಒಂದು, ಈ ಕಡೆ ಒಂದು ತಿರುಗಿಕೊಂಡಿರುತ್ತವೆ.
ಈಗ ಒಂದೊಂದು ಕಾರ್ಬನ್ ಪರಮಾಣುವೂ ಎರಡು ಬೇರೆ ಬೇರೆ ಪರಮಾಣು ಪುಂಜಗಳಿಗೆ ಬಂಧಿತವಾಗಿದ್ದರೆ ಎರಡು ಬಗೆಯ ಹಂಚಿಕೆ ಸಾಧ್ಯ. ದ್ವಿಬಂಧದ ಸಮತಲದ ಒಂದೇ ಪಕ್ಕದಲ್ಲಿ ಸಾಮ್ಯವಿರುವ ಪರಮಾಣು ಪುಂಜಗಳಿದ್ದರೆ ಅದಕ್ಕೆ ಸಿಸ್ ಐಸೊಮರ್ ಎಂದೂ ಆ ಪಕ್ಕದಲ್ಲೊಂದು ಈ ಪಕ್ಕದಲ್ಲೊಂದು ಇದ್ದರೆ ಟ್ರಾನ್ಸ್‌ ಐಸೊಮರ್ ಎಂದೂ ಹೆಸರು. ಮೆಲೇಯಿಕ್ ಆಮ್ಲ ಮತ್ತು ಫ್ಯುಮೆರಿಕ್ ಆಮ್ಲಗಳು ಇದಕ್ಕೆ ಒಳ್ಳೆಯ ನಿದರ್ಶನ. 
ಈ ಬಗೆಯ ಐಸೊಮೆರಿಸಂಗೆ ಜ್ಯಾಮಿತೀಯ ಐಸೊಮೆರಿಸಂ ಎಂದು ಹೆಸರು, ಕಾರ್ಬನ್-ನೈಟ್ರೊಜನ್ ದ್ವಿಬಂಧಗಳಿರುವ ಸಂಯುಕ್ತಗಳಲ್ಲೂ ಚಕ್ರೀಯ ಸಂಯುಕ್ತಗಳಲ್ಲೂ ಈ ಬಗೆಯ ಐಸೊಮೆರಿಸಮನ್ನು ಕಾಣಬಹುದು. ಅ=ಓ ಬಂಧದ ಸಂಯುಕ್ತಗಳಲ್ಲಿ ಜ್ಯಾಮಿತೀಯ ಐಸೊಮರುಗಳನ್ನು ಸಿಸ್, ಟ್ರಾನ್ಸ್‌ ಎಂದು ಕರೆಯುವ ಬದಲು ಸಿಸ್, ಆಂಟಿ ಎಂದು ಕರೆಯುವುದು ವಾಡಿಕೆ.
ಐಸೊಮೆರಿಸಂನ್ನು ಆಗಾರ್ಯ್‌ನಿಕ್ ಸಂಯುಕ್ತಗಳಲ್ಲಿ ವಿಶೇಷವಾಗಿ ಕಾಣಬಹುದು. ನಿಜ ಆದರೆ ಇನಾಗಾರ್ಯ್‌ನಿಕ್ ಸಂಯುಕ್ತಗಳಲ್ಲಿ ಐಸೊಮೆರಿಸಂ ಇಲ್ಲವೇ ಇಲ್ಲ ಎನ್ನುವಂತಿಲ್ಲ. ರಚನೀಯ ಐಸೊಮೆರಿಸಂ, ಸ್ಟೀರಿಯೊ ಐಸೊಮೆರಿಸಂ-ಎರಡರ ನಿದರ್ಶನಗಳೂ ಇನಾಗಾರ್ಯ್‌ನಿಕ್ ಸಂಯುಕ್ತಗಳಲ್ಲಿ ಕಂಡುಬಂದಿವೆ.
ಇನಾಗಾರ್ಯ್‌ನಿಕ್ ಸಂಯುಕ್ತಗಳಲ್ಲಿ ರಚನೀಯ ಐಸೊಮೆರಿಸಂ ನಿದರ್ಶನವಾಗಿ ಈ ಕೆಳಗಿನ ಸಂಯುಕ್ತಗಳನ್ನು ಕೊಡಬಹುದು.
  	            ಮತ್ತು     
  
ಸ್ಟೀರಿಯೊ ಐಸೊಮೆರಿಸಮಿಗೆ ನಿದರ್ಶನವಾಗಿ ಕೆಳಗಿನ ಸಂಯುಕ್ತಗಳನ್ನು ಕೊಡಬಹುದು.
ಐಸೊಟೋಪುಗಳು ಇರುವ ಸಂಯುಕ್ತಗಳನ್ನು ಪರಿಶೀಲಿಸುವಾಗ ಯಾವುದೇ ಸಂಯುಕ್ತಗಳು ಐಸೊಮರುಗಳೇ ಅಲ್ಲವೇ ಎಂಬುದನ್ನು ನಿರ್ಧರಿಸಬೇಕಾದರೆ ಒಂದೇ ಧಾತುವಿನ ಬೇರೆ ಬೇರೆ ಐಸೊಟೋಪುಗಳನ್ನು ಬೇರೆ ಬೇರೆ ಧಾತುಗಳ ಪರಮಾಣುಗಳೆಂದೇ ಪರಿಗಣಿಸಬೇಕಾಗುವುದು. ಉದಾಹರಣೆಗೆ ಅಊ4 ಮತ್ತು ಅಆ4ಗಳು ಐಸೊಮರುಗಳಲ್ಲ. ಅವು ಬೇರೆ ಬೇರೆ ಸಂಯುಕ್ತಗಳೇ. ಅಂತೆಯೇ ಅಊ3. 18ಔಊ ಮತ್ತು ಅಊ3.16ಔಊ .		*  
ಅ6ಊ5ಅಊಆ.ಅಊ3 ರಲ್ಲಿ ಊ ಮತ್ತು ಆ ಗಳನ್ನು ಬೇರೆ ಬೇರೆ ಧಾತುಗಳ ಪರಮಾಣುಗಳೆಂದೇ ಪರಿಗಣಿಸಬೇಕಾಗುತ್ತದೆ. *ಈ ಗುರುತಿರುವ ಕಾರ್ಬನ್ ಪರಮಾಣು ಅಸಮಾಂಗ ಪರಮಾಣು. ಆದ್ದರಿಂದ ಈ ಸಂಯುಕ್ತ ದ್ಯುತಿ ಐಸೊಮೆರಿಸಮನ್ನು ಪ್ರದರ್ಶಿಸುತ್ತದೆ. ಅದರ ಎರಡು ದ್ಯುತಿ ಪ್ರತೀಕಗಳನ್ನೂ ಪ್ರತ್ಯೇಕಿಸಲಾಗಿದೆ.      (ಜೆ.ಆರ್.ಎಲ್.; ಬಿ.ಸಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ